ಈ ವಾರಂತ್ಯದಿಂದಲೇ ಕಿರುತೆರೆ ಶೂಟಿಂಗ್ ಶುರು ಸಾಧ್ಯತೆ

ಬೆಂಗಳೂರು| Krishnaveni K| Last Updated: ಸೋಮವಾರ, 14 ಜೂನ್ 2021 (09:14 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಶೂಟಿಂಗ್ ಗೆ ಅನುಮತಿಯಿರದ ಕಾರಣ, ಧಾರವಾಹಿ ತಂಡಗಳು ಹೈದರಾಬಾದ್ ಕಡೆಗೆ ಮುಖ ಮಾಡಿದ್ದವು. ಇನ್ನೀಗ ತವರಿನಲ್ಲೇ ಶೂಟಿಂಗ್ ನಡೆಸಲು ತಯಾರಿ ನಡೆಸಿವೆ.
 

ಎರಡು ವಾರ ಹೈದರಾಬದ್ ರಾಮೋಜಿ ಫಿಲಂ ಸಿಟಿಯಲ್ಲಿ ಎಲ್ಲಾ ವಾಹಿನಿಗಳ ಪ್ರಮುಖ ಧಾರವಾಹಿಗಳ ಚಿತ್ರೀಕರಣ ನಡೆದಿತ್ತು. ಎರಡು ವಾರಗಳಿಗಾಗುವಷ್ಟು ಬ್ಯಾಂಕಿಂಗ್ ಎಪಿಸೋಡ್ ಶೂಟಿಂಗ್ ಮಾಡಿ ಬಂದಿರುವ ತಂಡಗಳು ಈ ವಾರದ ಅಂತ್ಯ ಅಥವಾ ಮುಂದಿನ ವಾರದಿಂದ ತವರಿನಲ್ಲೇ ಶೂಟಿಂಗ್ ಆರಂಭಿಸಲಿವೆ.
 
ರಾಜ್ಯ ಸರ್ಕಾರ ನಿರ್ಬಂಧಗಳೊಂದಿಗೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿರುವುದರಿಂದ ಮುಂದಿನ ವಾರದಿಂದ ಸೀಮಿತ ಕಾರ್ಮಿಕರನ್ನಿಟ್ಟುಕೊಂಡು ಚಿತ್ರೀಕರಣ ನಡೆಸುವ ಭರವಸೆಯಲ್ಲಿ ಕಿರುತೆರೆಯಿದೆ.
ಇದರಲ್ಲಿ ಇನ್ನಷ್ಟು ಓದಿ :