ಬೆಂಗಳೂರು: ಅಭಿಮಾನಿಗಳ ಬಹುದಿನದ ಬೇಡಿಕೆಯನ್ನು ಝಿ ಕನ್ನಡ ವಾಹಿನಿ ಪೂರೈಸಿದೆ. ಇಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ಕಾಶೀನಾಥ್ ಅತಿಥಿಯಾಗಿ ಆಗಮಿಸಲಿದ್ದಾರೆ. ಉಪೇಂದ್ರ ಸೇರಿದಂತೆ ಇಂದಿನ ಸ್ಟಾರ್ ನಟರನ್ನು ಹುಟ್ಟು ಹಾಕಿದ ಕಾಶೀನಾಥ್ ರನ್ನು ಸಾಧಕರ ಸೀಟಿನಲ್ಲಿ ಕೂರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಒತ್ತಾಯಗಳು ಕೇಳಿ ಬರುತ್ತಿತ್ತು.ತಮ್ಮ ಗುರುವಿನ ಬಗ್ಗೆ ನಟ ಉಪೇಂದ್ರ ವಿಶೇಷವಾಗಿ ಮಾತನಾಡಿರುವುದು ವೀಕ್ಷಕರಲ್ಲಿ ಕುತೂಹಲ ಹುಟ್ಟು ಹಾಕಿದೆ. ಅನುಭವದಂತಹ ಅತ್ಯುತ್ತಮ ಚಿತ್ರಗಳನ್ನು