ಬೆಂಗಳೂರು: ಬಿಗ್ ಬಾಸ್ ಕನ್ನಡ ಅಂತಿಮ ಎಪಿಸೋಡ್ ನಿನ್ನೆ ರಾತ್ರಿ ಪ್ರಸಾರವಾಗಿದೆ. ಶೋ ಅರ್ಧಕ್ಕೇ ಮುಕ್ತಾಯವಾದ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.ಲಾಕ್ ಡೌನ್ ಕಾರಣದಿಂದ ಬಿಗ್ ಬಾಸ್ ಎಂಟನೇ ಆವೃತ್ತಿಯನ್ನು ಅನಿವಾರ್ಯವಾಗಿ ರದ್ದು ಮಾಡಬೇಕಾಗಿ ಬಂದಿದೆ. ಬಿಗ್ ಬಾಸ್ 8 ಅಪೂರ್ಣವಾಗಿತ್ತು. ಹಾಗಿದ್ದರೂ ತೆರೆ ಎಳೆಯುವುದು ಅನಿವಾರ್ಯವಾಗಿತ್ತು ಎಂದು ಸುದೀಪ್ ಹೇಳಿದ್ದಾರೆ.‘ಎಲ್ಲಾ ಸ್ಪರ್ಧಿಗಳು, ತಂತ್ರಜ್ಞರು ಮತ್ತು ಬಿಗ್ ಬಾಸ್ ತಂಡ ಸುರಕ್ಷಿತವಾಗಿ ಮನೆಗೆ ತಲುಪಿ ತಮ್ಮ ಕುಟುಂಬದ ಜತೆ