‘ವೀಕೆಂಡ್ ವಿತ್ ರಮೇಶ್’ ಸೀಸನ್ 4 ಶುರು ಆಗುತ್ತಿರುವುದಕ್ಕೆ ಖುಷ್ ಆದ ಕಿಚ್ಚ ಸುದೀಪ್

ಬೆಂಗಳೂರು, ಬುಧವಾರ, 17 ಏಪ್ರಿಲ್ 2019 (07:55 IST)

ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜೀ ಕನ್ನಡದಲ್ಲಿ ಈ ವಾರಂತ್ಯದಿಂದ ಆರಂಭವಾಗುತ್ತಿದೆ. ವೀಕ್ಷಕರ ಜತೆಗೆ ಸಾಧಕರೂ ಈಗ ಈ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ.


 
ಈ ಹಿಂದಿನ ಸೀಸನ್ ನಲ್ಲಿ ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನದ ಕತೆ ಹೇಳಿದ್ದ ಕಿಚ್ಚ ಸುದೀಪ್ ಇದೀಗ ಸೀಸನ್ 4 ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.
 
‘ರಮೇಶ್ ಅರವಿಂದ್ ಸರ್ ಹಲವು ಸಾಧಕರನ್ನು ತಮ್ಮ ಜೀವನದ ಪುಟ ತಿರುವಂತೆ ಮಾಡಿದ್ದೀರಿ. ಇದು ಕೇವಲ ಸಂದರ್ಶನವಲ್ಲ. ನಮ್ಮ ಜೀವನದ ಗತ ವೈಭವವನ್ನು ಮೆಲುಕು ಹಾಕುವ ಶೋ. ಆ ನೆನಪುಗಳೇ ನಮ್ಮ ಗುರುತುಗಳು. ನಿಮ್ಮ ಹೊಸ ಸೀಸನ್ ಗೆ ಶುಭ ಹಾರೈಕೆಗಳು ರಮೇಶ್ ಸರ್. ಆ ಕೆಂಪು ಖುರ್ಚಿಯೇ ಈಗ ಸೆಲೆಬ್ರಿಟಿ ಆಗಿಬಿಟ್ಟಿದೆ’ ಎಂದು ಸುದೀಪ್ ಶುಭ ಹಾರೈಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫೇರ್ ನೆಸ್ ಕ್ರೀಂ ಕಂಪನಿ ನೀಡಿದ 2 ಕೋಟಿ ರೂ. ಆಫರ್ ತಿರಸ್ಕರಿಸಿದ ನಟಿ ಸಾಯಿ ಪಲ್ಲವಿ! ಕಾರಣವೇನು ಗೊತ್ತಾ?

ಚೆನ್ನೈ: ಮಾರಿ 2 ಸಿನಿಮಾ ಖ್ಯಾತಿಯ ನಟಿ ಸಾಯಿ ಪಲ್ಲವಿ ಫೇರ್ ನೆಸ್ ಕಂಪನಿಯೊಂದು ನೀಡಿದ 2 ಕೋಟಿ ರೂ. ...

news

ನನ್ನ ಮಗ ಮಂಟಪಕ್ಕೆ ಬರುವವರೆಗೂ ಗಂಡ ತಾಳಿ ಕಟ್ಟಲಿಲ್ಲ ಎಂದ ರಜನೀಕಾಂತ್ ಪುತ್ರಿ!

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ರಜನೀಕಾಂತ್ ಇತ್ತೀಚೆಗಷ್ಟೇ ಉದ್ಯಮಿ ವಿಶಾಖನ್ ಜತೆಗೆ ...

news

ಫ್ರೀ ಇದ್ದಾಗ ಬೈಟ್ಸ್ ತಗೊಳ್ಳಕೆ ಬರ್ತೀರಾ? ಮಾಧ್ಯಮಗಳ ಮೇಲೆ ಸಿಟ್ಟಾದ ಶಿವರಾಜ್ ಕುಮಾರ್

ಬೆಂಗಳೂರು: ಟಿವಿ, ಪತ್ರಿಕೆ ಏನೇ ತೆರೆದರೂ ಈಗ ರಾಜಕೀಯ ಬಿಟ್ಟು ಬೇರೆ ವಿಚಾರಗಳೇ ಬರ್ತಿಲ್ಲ. ಇದು ನಟ ...

news

ಯಾವನೋ ಎಂದ ಸಿಎಂ ಕುಮಾರಸ್ವಾಮಿಗೆ ರಾಕಿಂಗ್ ಸ್ಟಾರ್ ಯಶ್ ತಿರುಗೇಟು

ಮಂಡ್ಯ: ಮಂಡ್ಯ ಚುನಾವಣಾ ರ್ಯಾಲಿಯಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ...