ಬೆಂಗಳೂರು: ಕೊರೋನಾ ಸಮಯದಲ್ಲಿ ಎಷ್ಟೋ ಜನರ ಬಾಳು ಬೀದಿಗೆ ಬಿದ್ದಿದೆ. ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕೆಲಸವಿಲ್ಲದೇ, ದುಡ್ಡಿಲ್ಲದೇ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇನ್ನು, ಕೆಲವರು ಕೊರೋನಾ ಪೀಡಿತರಾಗಿ ಹೊರಗೆಯೂ ಹೋಗಲಾರದೇ ಮನೆಯಲ್ಲೂ ಅಡುಗೆ ಮಾಡಲಾರದೇ ತೊಂದರೆ ಅನುಭವಿಸುತ್ತಿದ್ದಾರೆ.ಇಂತಹವರಿಗೆ ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಮತ್ತು ಅವರ ಬಳಗ ನೆರವು ನೀಡುತ್ತಿದ್ದಾರೆ. ಕಿರಣ್ ರಾಜ್ ತಮ್ಮ ‘ಕಿರಣ್ ಫೌಂಡೇಷನ್’ ವತಿಯಿಂದ ಹಸಿದವರಿಗೆ ಅನ್ನ ಒದಗಿಸುವ ಕೆಲಸ ಮಾಡುತ್ತಿದ್ದಾರೆ.ಎಷ್ಟೋ ಮನೆಗಳಲ್ಲಿ ಕೊರೋನಾ