ಬಿಗ್ ಬಾಸ್ ಕನ್ನಡ: ಜೈ ಜಗದೀಶ್ ಗೆ ಕ್ಷಮೆ ಕೇಳಿದ ಕಿಶನ್

ಬೆಂಗಳೂರು| Krishnaveni K| Last Modified ಬುಧವಾರ, 23 ಅಕ್ಟೋಬರ್ 2019 (11:11 IST)
ಬೆಂಗಳೂರು: ಯಾರಿಗೋ ಬೇಸರವಾಗಿದೆಯೆಂದು ನೀವು ಮಾತನಾಡಿದ್ದು ಸರಿಯಲ್ಲ ಎಂದು ಹಿರಿಯ ನಟ ಜೈ ಜಗದೀಶ್ ಗೆ ಸಲಹೆ ಕೊಡಲು ಹೋಗಿ ವಾಗ್ವಾದಕ್ಕೆ ಕಾರಣವಾಗಿದ್ದ ಸ್ಪರ್ಧಿ ಕಿಶನ್ ಈಗ ಕ್ಷಮೆ ಯಾಚಿಸಿದ್ದಾರೆ.

 
ಜೈ ಜಗದೀಶ್ ಮಾತನಾಡುವ ಭಾಷೆ ಸರಿಯಿಲ್ಲ ಎಂದು ಕಿಶನ್ ಮೊನ್ನೆ ಹಿರಿಯ ನಟನ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದ ಜೈ ಜಗದೀಶ್ ನಿನ್ನ ಬಳಿ ಹಾಗೆ ಮಾತನಾಡಿದ್ದರೆ ಹೇಳು. ಬೇರೆಯವರಿಗೆ ನಾನು ಹೇಳಿದ್ದರೆ ನೀನು ಯಾಕೆ ಕೇಳಲು ಬರ್ತಿದ್ದೀಯಾ? ಎಂದೆಲ್ಲಾ ಮಾತಿನ ಚಕಮಕಿ ನಡೆಸಿದ್ದರು.
 
ಆ ವಿವಾದ ತಣ್ಣಗಾಗದೇ ಆರದ ಬೆಂಕಿಯ ಹಾಗೆ ಹೊಗೆಯಾಡುತ್ತಲೇ ಇತ್ತು. ಇದೀಗ ಸಹ ಸ್ಪರ್ಧಿ ಹರೀಶ್ ರಾಜ್ ಸಲಹೆಯ ಮೇರೆಗೆ ಕಿಶನ್ ನೇರವಾಗಿ ಜೈ ಜಗದೀಶ್ ಬಳಿ ಹೋಗಿ ಕ್ಷಮೆ ಯಾಚಿಸಿದ್ದಾರೆ. ಆದರೂ ಜೈಜಗದೀಶ್ ಗೆ ಪೂರ್ತಿ ಸಮಾಧಾನವಾದಂತೆ ಇರಲಿಲ್ಲ. ನನ್ನ ಮೇಲೆ ಏನೇ ಆಕ್ಷೇಪವಿದ್ದರೂ ನನ್ನನ್ನು ಪ್ರತ್ಯೇಕವಾಗಿ ಕರೆದು ಹೇಳಬೇಕಿತ್ತು. ಅದು ಬಿಟ್ಟು ಹಿರಿಯನಾದ ನನಗೆ ನಿನಗೆ ಸಂಬಂಧಪಡದ ವಿಚಾರದಲ್ಲಿ ಎಲ್ಲರ ಎದುರು ಹಾಗೆ ಮಾತನಾಡಿದ್ದು ಸರಿಯಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
 
ಆದರೆ ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದು, ಕಿಶನ್ ಪರವಾಗಿಯೇ ಮಾತನಾಡುತ್ತಿದ್ದಾರೆ. ಜೈ ಜಗದೀಶ್ ಹಿರಿಯ ಎಂಬ ಕಾರಣಕ್ಕೆ ಅವರು ಹೇಳಿದ್ದನ್ನೆಲ್ಲಾ ಒಪ್ಪಲು ಸಾಧ‍್ಯವಿಲ್ಲ. ಕಿಶನ್ ಕ್ಷಮೆ ಕೇಳಿ ದೊಡ್ಡವನಾಗಿಬಿಟ್ಟ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :