ಬೆಂಗಳೂರು: ಮುಂದಿನ ವಾರದಿಂದ ಪ್ರತೀ ವಾರ ರಮೇಶ್ ಅರವಿಂದ್ ನಿಮ್ಮ ಮನೆಗೆ ಬರುತ್ತಿದ್ದಾರೆ. ಅಂದರೆ ಜೀ ಕನ್ನಡ ವಾಹಿನಿಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಮೂರನೇ ಸಂಚಿಕೆ ಆರಂಭವಾಗುತ್ತಿದೆ. ಆದರೆ ಈ ಬಾರಿಯ ಸಂಚಿಕೆ ಭರ್ಜರಿಯಾಗಿಯೇ ಆರಂಭವಾಗಲಿದೆ. ಕನ್ನಡದ ಖ್ಯಾತ ನಟ, ರಾಜಕಾರಣಿ ನವರಸನಾಯಕ ಜಗ್ಗೇಶ್ ರಮೇಶ್ ಎದುರು ಸಾಧಕರ ಸೀಟ್ ನಲ್ಲಿ ಕೂರಲಿದ್ದಾರೆ. ಕಳೆದ ಎರಡೂ ಸಂಚಿಕೆಯಲ್ಲಿ ಈ ನಟನನ್ನು ಸಾಧಕರ ಸೀಟ್ ನಲ್ಲಿ ಕೂರಿಸಬೇಕೆಂದು ಅಭಿಮಾನಿಗಳು ಒತ್ತಾಯ