ಕುರುಕ್ಷೇತ್ರ ಸಿನಿಮಾಗೆ 100: ಸದ್ಯದಲ್ಲೇ ಕಿರುತೆರೆಯಲ್ಲಿ

ಬೆಂಗಳೂರು| Krishnaveni K| Last Modified ಸೋಮವಾರ, 18 ನವೆಂಬರ್ 2019 (08:56 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಶತದಿನೋತ್ಸವ ಪೂರೈಸಿದ್ದು, ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

 
ಪೌರಾಣಿಕ ಸಿನಿಮಾ ಕುರುಕ್ಷೇತ್ರದಲ್ಲಿ ಬಹುತಾರಾಗಣವಿದ್ದು, ಕೆಜಿಎಫ್ ನಂತರ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾ ಸದ್ಯದಲ್ಲೇ ಪ್ರಸಾರವಾಗಲಿದೆ ಎಂದು ಜೀ ವಾಹಿನಿ ಪ್ರಕಟಿಸಿದೆ.
 
ಕುರುಕ್ಷೇತ್ರ ಸಿನಿಮಾವನ್ನು ಎಂದೋ ಕಿರುತೆರೆಯಲ್ಲಿ ಪ್ರಸಾರ ಮಾಡಲು ಜೀ ಸಿದ್ಧತೆ ನಡೆಸಿತ್ತು. ಆದರೆ ಅಭಿಮಾನಿಗಳಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆಗ ಪ್ರಸಾರ ಮಾಡಿರಲಿಲ್ಲ. ಇದೀಗ 100 ದಿನ ಪೂರೈಸಿದ ನಂತರ ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಆದರೆ ದಿನಾಂಕ ಇನ್ನೂ ಪ್ರಕಟಿಸಿಲ್ಲ.
ಇದರಲ್ಲಿ ಇನ್ನಷ್ಟು ಓದಿ :