ಇಂದು ಟಿವಿಯಲ್ಲಿ ಫಸ್ಟ್ ಟೈಮ್ ‘ಕುರುಕ್ಷೇತ್ರ’

ಬೆಂಗಳೂರು| Krishnaveni K| Last Modified ಭಾನುವಾರ, 15 ಡಿಸೆಂಬರ್ 2019 (08:50 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ ಇಂದು ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿದೆ.

 
ಕೆಜಿಎಫ್ ನಂತರ ನೂರು ಕೋಟಿ ಕ್ಲಬ್ ಸೇರಿದ ಸೂಪರ್ ಹಿಟ್ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಮಿಂಚಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಸಿನಿಮಾ ಇದು ಎನ್ನುವುದೂ ಇದರ ವಿಶೇಷ. ಇವರಲ್ಲದೆ, ಬಹುತಾರಾಗಣವೇ ಈ ಸಿನಿಮಾದಲ್ಲಿದೆ.
 
ಈ ಸೂಪರ್ ಹಿಟ್ ಸಿನಿಮಾ ಇಂದು ಸಂಜೆ 6.30 ಕ್ಕೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :