ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿದ್ದ ಮತ್ತೊಂದು ಧಾರವಾಹಿ ಈ ವಾರ ಅಂತ್ಯ ಕಾಣುತ್ತಿದೆ. ಸತತ ಏಳು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ಈ ವಾರ ಕೊನೆಗೊಳ್ಳುತ್ತಿದೆ.ನಿನ್ನೆ ಕೊನೇ ದಿನದ ಶೂಟಿಂಗ್ ಮುಗಿಸಿದ ಧಾರವಾಹಿ ತಂಡ ಲೈವ್ ಬಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದೆ. ನಾಯಕಿ ಪಾತ್ರಧಾರಿಗಳಾದ ಗೊಂಬೆ ಅಲಿಯಾಸ್ ಶ್ರುತಿ ಮತ್ತು ಚಿನ್ನು ಇಡೀ ಧಾರವಾಹಿ ತಂಡದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಧನ್ಯವಾದ ಸಲ್ಲಿಸಿದ್ದಲ್ಲದೆ,