Widgets Magazine

ಕಿರುತೆರೆಗೆ ಲೂಸ್ ಮಾದ ಯೋಗಿ: ನವಂಬರ್ 9 ರಿಂದ ಗಾನ ಬಜಾನ ಶೋ

ಬೆಂಗಳೂರು| Krishnaveni K| Last Modified ಗುರುವಾರ, 31 ಅಕ್ಟೋಬರ್ 2019 (09:11 IST)
ಬೆಂಗಳೂರು: ಕಿರುತೆರೆಗೆ ಸ್ಯಾಂಡಲ್ ವುಡ್ ನಟರು ನಿರೂಪಕರಾಗಿ ಬರುತ್ತಿರುವುದು ಹೊಸದೇನೂ ಅಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಂದ ಹಿಡಿದು ಕಿಚ್ಚ ಸುದೀಪ್ ವರೆಗೆ ಎಲ್ಲರೂ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.
 

ಇದೀಗ ನಟ ಲೂಸ್ ಮಾದ ಯೋಗಿ ಕೂಡಾ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ. ಯೋಗಿಯ ಈ ಹೊಸ ಅವತಾರ ಪ್ರೇಕ್ಷಕರಿಗೆ ಹೊಸದು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗಾನ ಬಜಾನ ಎಂಬ ಶೋ ಒಂದನ್ನು ಯೋಗಿ ನಡೆಸಿಕೊಡಲಿದ್ದಾರೆ.
 
ಹೆಸರು ಹೇಳಿದ ತಕ್ಷಣ ಇದು ಒಂದು ಸಿಂಗಿಂಗ್ ಶೋ ಎಂದು ಹೇಳಬಹುದು. ಆದರೆ ಮಾಮೂಲು ಹಾಡಿನ ಶೋ ಇದಲ್ಲ. ಸ್ವಲ್ಪ ತಮಾಷೆ, ಮಜಾ ಎಲ್ಲದರ ಜತೆಗೆ ಹಾಡಿನ ಆಟ ಈ ಶೋನಲ್ಲಿರಲಿದೆ. ನವಂಬರ್ 9 ರಿಂದ ರಾತ್ರಿ 10 ಗಂಟೆಗೆ ಶೋ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :