ಸ್ಟಾರ್ ಸುವರ್ಣವಾಹಿನಿಯು ಮಹಾ ಶಿವರಾತ್ರಿ ಅಂಗವಾಗಿ ಮಹಾಯಾಗ ವನ್ನು ಇದೇ ಫೆಬ್ರವರಿ 18ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ಕಮಲಮ್ಮನಗುಂಡಿ (ಇಸ್ಕಾನ್ ಎದುರು) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ಕ್ಕೆ ಭಕ್ತರಿಂದ 11 ಲಕ್ಷ ಶಿವನಾಮ ಜಪ, 1008 ಮೃತ್ತಿಕಾ ಶಿವಲಿಂಗ ಸ್ಥಾಪನೆ ಮತ್ತು ಡಾ. ವಿದ್ವಾನ್ ಗೋಪಾಲಕೃಷ್ಣ ಗುರೂಜಿಯವರಿಂದ ಮಹಾ ರುದ್ರಯಾಗ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಬೆಂಗಳೂರಿನ ವಿವಿಧ ಭಜನಾ ಮಂಡಿಗಳಿಂದ ಶಿವ, ಪಾರ್ವತಿ ಮತ್ತು ಗಣೇಶನ ಕುರಿತು ಭಜನೆ