ಬೆಂಗಳೂರು: ಮಜಾ ಟಾಕೀಸ್ ಎಂಬ ಕಲರ್ಸ್ ವಾಹಿನಿಯ ಶೋ ಭಾರೀ ಹಿಟ್ ಆಗಿತ್ತು. ಕನ್ನಡ ಕಿರುತೆರೆಯಲ್ಲಿ ಹಲವು ಕಾಮಿಡಿ ಶೋಗಳಿಗೆ ಇದೇ ನಾಂದಿ ಹಾಡಿತ್ತು. ಇದೀಗ ಮತ್ತೆ ಮಜಾ ಟಾಕೀಸ್ ಬರಲಿದೆ. ಒಂದನೇ ಭಾಗ ಮುಕ್ತಾಯವಾದಾಗ ಅದೆಷ್ಟೋ ವೀಕ್ಷಕರು ಬೇಸರಪಟ್ಟುಕೊಂಡಿದ್ದರು. ಸಂಪೂರ್ಣ ಮನರಂಜನೆ ಜತೆಗೆ ಸಿನಿ, ಸಾಹಿತ್ಯ ಲೋಕದ ದಿಗ್ಗಜರು ಬಂದು ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡುತ್ತಿತ್ತು. ಇದೀಗ ಸೃಜನ್ ಲೋಕೇಶ್ ಮತ್ತೆ ಮಜಾ ಟಾಕೀಸ್ ಶುರು ಮಾಡಲು