ಈಗಾಗಲೆ ಒಂದರ ಮೇಲೊಂದು ಯಶಸ್ವಿ ಕಾರ್ಯಕ್ರಮವನ್ನು ಬಿತ್ತರಿಸುತ್ತಿರುವ ಸ್ಟಾರ್ ಸುವರ್ಣ ಈಗ ವಿಭಿನ್ನವಾದ, ಹೊಸರೂಪದ ಧಾರವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲು ಸಜ್ಜಾಗಿದೆ. ಸಂಗೀತವನ್ನೇ ಮುಖ್ಯ ಕಥಾವಸ್ತುವನ್ನಾಗಿರಿಸಿಕೊಂಡು ಹೆಣೆದ ಸುಂದರ ಪ್ರೇಮಕಥೆ `ತ್ರಿವೇಣಿ ಸಂಗಮ. ಇಂತಹ ಮೆಗಾ ಸೀರಿಯಲ್ಗಳು ಕನ್ನಡದಲ್ಲಿ ನಿರ್ಮಾಣವಾಗಿರುವುದು ಕಡಿಮೆ. ಇಂಪಾದ ಸಂಗೀತ ಮತ್ತು ನವಿರಾದ ಪ್ರೇಮಕಥೆಯ ತ್ರಿವೇಣಿ ಸಂಗಮ ಕನ್ನಡ ಧಾರಾವಾಹಿಗಳ ಸಾಲಿನಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ ಎಂಬುದು ವಾಹಿನಿಯ ಆಶಯ. ಇದೇ ಬರುವ ಫೆಬ್ರವರಿ 6ರಿಂದ