ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರಾಗಿ ಮುದ್ದೆ ತಿನ್ನೋ ವಿಚಾರಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿವೇದಿತಾ ತಮ್ಮ ಪತಿ ಚಂದನ್ ಜತೆ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ರಾಗಿ ಮುದ್ದೆಯನ್ನು ಚಮಚ ಬಳಸಿ ತಿನ್ನುವುದನ್ನು ಹೇಳಿಕೊಡುತ್ತಾರೆ. ಕೈಯಲ್ಲಿ ತಿನ್ನೋದೆಲ್ಲಾ ಚೆನ್ನಾಗಿರಲ್ಲ ಎಂದು ಕೇವಲವಾಗಿ ಮಾತನಾಡಿದ್ದಕ್ಕೆ ನಿವೇದಿತಾ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. ಸಂಸ್ಕೃತಿ ಬಗ್ಗೆ ತಲೆಬುಡ ಗೊತ್ತಿಲ್ಲದ ಇಂತಹವರನ್ನೆಲ್ಲಾ