ಕನ್ನಡ ಕಿರುತೆರೆಗೆ ಕಾಲಿಡಲಿರುವ ಖ್ಯಾತ ನಟಿ ಯಾರು ಗೊತ್ತೇ?

ಬೆಂಗಳೂರು| Krishnaveni K| Last Modified ಗುರುವಾರ, 3 ಜನವರಿ 2019 (09:19 IST)
ಬೆಂಗಳೂರು: ಕಿರುತೆರೆಗೆ ಇತ್ತೀಚೆಗೆ ಬೆಳ್ಳಿ ತೆರೆ ಕಲಾವಿದರು ಕಾಲಿಡುವುದು ಹೊಸತೇನಲ್ಲ. ಇದೀಗ ತಮಿಳಿನಲ್ಲಿ ಹೆಸರು ಮಾಡಿರುವ ಖ್ಯಾತ ನಟಿಯೊಬ್ಬರು ಕನ್ನಡ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ.
 
ಅವರು ರಾಧಿಕಾ ಶರತ್ ಕುಮಾರ್.  ಉದಯ ಟಿವಿಯಲ್ಲಿ ಜನವರಿ 7 ರಿಂದ ಪ್ರಸಾರವಾಗಲಿರುವ ಚಂದ್ರಕಲಾ ಎನ್ನುವ ಧಾರವಾಹಿಯೊಂದರಲ್ಲಿ ರಾಧಿಕಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರಾಧಿಕಾ ಜತೆಗೆ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
ಉದಯ ಟಿವಿಯಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ಜೈ ಹನುಮಾನ್, ನಂದಿನಿ ಧಾರವಾಹಿಗಳ ಟೀಂ ಈ ಧಾರವಾಹಿಯನ್ನೂ ನಿರ್ಮಿಸುತ್ತಿದೆ. ಶತಮಾನಗಳ ಹಿಂದೆ ನಡೆದ ಅಮ್ಮ-ಮಗಳ ಕತೆ ಇದಾಗಿರುವುದರಿಂದ ರಾಧಿಕಾ ಗೆಟಪ್ ಕೂಡಾ ಪೌರಾಣಿಕ ಪಾತ್ರದಂತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :