ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರವಾಹಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದರೂ ನಿರ್ದೇಶಕ ರಾಮ್ ಜೀ ಮಾತ್ರ ತಣ್ಣಗಿದ್ದಾರೆ. ಪುಟ್ಟಗೌರಿಯ ಅತಿರೇಕವೆನಿಸುವ ಸಾಹಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಲಾಗುತ್ತಿದೆ. ನಾಯಕಿ ಗೌರಿ ಹುಲಿಯೊಂದಿಗೆ ಸೆಣಸುವುದು, ಅಷ್ಟು ಎತ್ತರದಿಂದ ಬಿದ್ದರೂ ಸ್ವಲ್ಪವೂ ಗಾಯವಾಗದೇ ಇರುವುದು, ಬಿದ್ದ ಮೇಲೂ ಚಪ್ಪಲಿ, ಹೂವು ಕೊಂಚವೂ ಕೊಂಕದೇ ಇರುವುದು, ಹಾವಿನೊಂದಿಗೆ ಸೆಣಸುವುದು ಇತ್ಯಾದಿ ಬಗ್ಗೆ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.ಹಾಗಿದ್ದರೂ