ಬೆಂಗಳೂರು: ಸ್ಪುರದ್ರೂಪಿ ನಟ, ನಿರ್ದೇಶಕ ರಮೇಶ್ ಅರವಿಂದ್ ಏನೇ ಮಾಡುವುದಿದ್ದರೂ ಪರ್ಫೆಕ್ಟ್ ಆಗಿ ಮಾಡುತ್ತಾರೆ. ಇದೀಗ ನಿರ್ದೇಶಕರಾಗಿ ಪರ್ಫೆಕ್ಟ್ ಎನಿಸಿಕೊಂಡ ರಮೇಶ್, ನಿರ್ಮಾಪಕರಾಗುತ್ತಿದ್ದಾರೆ.ಅದೂ ಕಿರುತೆರೆಯಲ್ಲಿ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿಗೆ ಇನ್ನು ರಮೇಶ್ ಅರವಿಂದ್ ನಿರ್ಮಾಪಕ. ಅವರ ವಂದನಾ ಮೀಡಿಯಾ ಕ್ರಿಯೇಷನ್ಸ ನಿರ್ಮಾಣ ಸಂಸ್ಥೆಯಡಿಯಲ್ಲಿ ಈ ಧಾರವಾಹಿಯ ಮುಂದಿನ ಭಾಗವನ್ನು ರಮೇಶ್ ಅರವಿಂದ್ ನಿರ್ಮಿಸಲಿದ್ದಾರೆ.ಈಗಾಗಲೇ ನಂದಿನಿ ಧಾರವಾಹಿ ತನ್ನ ವಿಶಿಷ್ಟ ಗ್ರಾಫಿಕ್ಸ್, ವಿಶ್ಯುವಲ್ಸ್ ನಿಂದಾಗಿ ಜನಪ್ರಿಯವಾಗಿದೆ. ಕಿರುತೆರೆ ಲೋಕಕ್ಕೆ