Widgets Magazine

ಲಾಕ್ ಡೌನ್ ನಿಂದಾಗಿ ಸದ್ದಿಲ್ಲದೇ ಮುಕ್ತಾಯ ಕಾಣುತ್ತಿರುವ ಧಾರವಾಹಿಗಳು

ಬೆಂಗಳೂರು| Krishnaveni K| Last Modified ಮಂಗಳವಾರ, 19 ಮೇ 2020 (09:11 IST)
ಬೆಂಗಳೂರು: ಲಾಕ್ ಡೌನ್ ಕಿರುತೆರೆ ಉದ್ಯಮದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಪ್ರತಿನಿತ್ಯದ ಎಪಿಸೋಡ್ ಗಳಿಲ್ಲದೇ ಕಿರುತೆರೆ ಆದಾಯವಿಲ್ಲದೇ ಪರದಾಡುತ್ತಿದೆ.

 
ಇದೀಗ ಕಲರ್ಸ್ ಸೂಪರ್ ವಾಹಿನಿ ತೆರೆಮರೆಗೆ ಸರಿಯುತ್ತಿದ್ದು, ನಿಲ್ಲಿಸಿವೆ. ಇದರಿಂದ ಹಲವರಿಗೆ ನಿತ್ಯದ ಅನ್ನಕ್ಕೆ ಕತ್ತರಿ ಬಿದ್ದಿದೆ.
 
ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಾಯಕಿ’, ‘ದೇವಯಾನಿ’, ‘ಕಾವೇರಿ’ ಧಾರವಾಹಿಯೂ ಇದ್ದಕ್ಕಿದ್ದಂತೆ ಪ್ರಸಾರ ನಿಲ್ಲಿಸಿದೆ. ಅಂದರೆ ಲಾಕ್ ಡೌನ್ ಹೊಡೆತ ಧಾರವಾಹಿಗಳ ಮೇಲೂ ಬೀಳುತ್ತಿದೆ. ಲಾಕ್ ಡೌನ್ ನಿರ್ಬಂಧ ಮುಗಿದ ಮೇಲೆ ಹೊಸತಾಗಿ ಆರಂಭವಾಗುವ ಸವಾಲಿನಲ್ಲಿ ಕಿರುತೆರೆಯಿದೆ.
ಇದರಲ್ಲಿ ಇನ್ನಷ್ಟು ಓದಿ :