ಬೆಂಗಳೂರು: ಕೊರೊನಾ ಭಯದಲ್ಲೇ ಶೂಟಿಂಗ್ ಶುರು ಮಾಡಿರುವ ಧಾರವಾಹಿ ತಂಡ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜೂನ್ 1 ರಿಂದ ಹೊಸ ಸಂಚಿಕೆಗಳು ಆರಂಭವಾಗಲಿದ್ದು, ಇಂದಿನಿಂದ ಧಾರವಾಹಿಗಳ ಶೂಟಿಂಗ್ ಶುರು ಮಾಡಲಾಗಿದೆ.ಕಡಿಮೆ ತಂತ್ರಜ್ಞರನ್ನು ಬಳಸಿ, ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಮಾಡಲಾಗುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ತಂಡ ಫೇಸ್ ಬುಕ್ ಲೈವ್ ಮುಖಾಂತರ ತಾವು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸಿದೆ.ನಿರ್ದೇಶಕರಿಂದ ಹಿಡಿದು ಎಲ್ಲಾ ತಂತ್ರಜ್ಞರು