ಬೆಂಗಳೂರು: ಲಾಕ್ ಡೌನ್ ವೇಳೆ ಮನೆಯಲ್ಲಿರುವಾಗ ಧಾರವಾಹಿ ನೋಡುತ್ತಾ ಕಾಲ ಕಳೆಯೋಣವೆಂದರೆ ಅಲ್ಲೂ ಹೊಸ ಎಪಿಸೋಡ್ ಗಳಿಲ್ಲದೇ ವೀಕ್ಷಕರು ಬೇಸರದಲ್ಲಿದ್ದಾರೆ.ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು, ಅದಾದ ಬಳಿಕವೇ ಧಾರವಾಹಿ ಶೂಟಿಂಗ್ ಮುಂದುವರಿಸಲು ವಾಹಿನಿಗಳು ನಿರ್ಧರಿಸಿವೆ. ಅಲ್ಲಿಯವರೆಗೆ ಹಳೆಯ ಧಾರವಾಹಿಗಳು, ರಿಯಾಲಿಟಿ ಶೋಗಳು, ಚಲನಚಿತ್ರಗಳನ್ನೇ ಪ್ರಸಾರ ಮಾಡುತ್ತಾ ಸಮಯ ಕಳೆಯುತ್ತಿವೆ.ಜೊತೆ ಜೊತೆಯಲಿ ಧಾರವಾಹಿ ನಾಯಕ ನಟ ಅನಿರುದ್ಧ್ ಗೆ ಅಭಿಮಾನಿಯೊಬ್ಬರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದು,