Widgets Magazine

ದಿಡೀರ್ ಆಗಿ ಜನಪ್ರಿಯ ಧಾರವಾಹಿ ಸೇವಂತಿ ನಾಯಕಿಯೇ ಬದಲು! ವೀಕ್ಷರರೊಳಗೆ ಗುಸು ಗುಸು ಶುರು!

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (11:48 IST)
ಬೆಂಗಳೂರು: ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ‘ಸೇವಂತಿ’ಯ ನಾಯಕಿ ಬದಲಾಗುತ್ತಿರುವ ಬಗ್ಗೆ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಸುಳಿವು ಕೊಟ್ಟಿದೆ.

 
ಇದುವರೆಗೆ ಖ್ಯಾತ ಕಿರುತೆರೆ ನಟಿ ನಾಯಕಿಯಾಗಿದ್ದರು. ಆದರೆ ಇದೀಗ ಅವರ ಸ್ಥಾನಕ್ಕೆ ‘ಅರಗಿಣಿ’ ಧಾರವಾಹಿ ಖ್ಯಾತಿ ಮೇಘನಾ ಆಗಮನವಾಗುತ್ತಿದೆ ಎನ್ನಲಾಗಿದೆ. ಆದರೆ ಸೇವಂತಿ ಎಂದರೆ ಪಲ್ಲವಿ ಎನ್ನುವಷ್ಟರ ಮಟ್ಟಿಗೆ ಹೊಂದಿಕೊಂಡಿದ್ದ ವೀಕ್ಷಕರಿಗೆ ಈ ದಿಡೀರ್ ಬದಲಾವಣೆ ಇಷ್ಟವಾಗಿಲ್ಲ.
 
‘ಕೊಡೆಮುರುಗ’ ನಾಯಕಿ ಪಲ್ಲವಿ ಗೌಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದಕ್ಕೆ ಧಾರವಾಹಿಯಿಂದ ಹೊರಬಂದಿರಬಹುದು ಎಂದು ಕೆಲವರು ಹೇಳುತ್ತಿದ್ದರೂ, ಚಿತ್ರದುರ್ಗದಲ್ಲಿ ನಡೆದಿದ್ದ ಧಾರವಾಹಿಯ ಕಾರ್ಯಕ್ರಮಕ್ಕೂ ಪಲ್ಲವಿ ಬಂದಿರಲಿಲ್ಲ. ಹೀಗಾಗಿ ಏನೋ ಅಸಮಾಧಾನವಿರಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಗುಲ್ಲೆಬ್ಬಿದೆ. ಈ ಬಗ್ಗೆ ಪಲ್ಲವಿ ಗೌಡ ಕಡೆಯಿಂದ ಯಾವುದೇ ಸುದ್ದಿ ಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :