ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಕೂತಿರುವ ಜನತೆಗಾಗಿ ಹಳೆಯ ತನ್ನ ಸೂಪರ್ ಹಿಟ್ ಧಾರವಾಹಿಗಳನ್ನು ದೂರದರ್ಶನ ಮರಳಿ ಪ್ರಸಾರ ಮಾಡುತ್ತಿದೆ.ಈಗಾಗಲೇ ರಾಮಾಯಣ, ಮಹಾಭಾರತ, ಸರ್ಕಸ್ ಧಾರವಾಹಿಗಳನ್ನು ಪುನರ್ ಪ್ರಸಾರ ಮಾಡಲು ಆರಂಭಿಸಿದ್ದು, ವೀಕ್ಷಕರು ಅಂದಿನಷ್ಟೇ ಖುಷಿಯಲ್ಲಿ ಈ ಪೌರಾಣಿಕ ಧಾರವಾಹಿಗಳನ್ನು ವೀಕ್ಷಿಸುತ್ತಿದ್ದಾರೆ.ಈ ನಡುವೆ ವೀಕ್ಷಕರು ಮತ್ತೆ ಶಕ್ತಿಮಾನ್ ಧಾರವಾಹಿ ಪ್ರಸಾರ ಆರಂಭಿಸಿ ಎಂದು ಬೇಡಿಕೆಯಿಟ್ಟಿದ್ದರು. ಅದರಂತೆ ಇದೀಗ ಏಪ್ರಿಲ್ 1 ರಿಂದ ಮಧ್ಯಾಹ್ನ 1 ಗಂಟೆಗೆ ಶಕ್ತಿಮಾನ್ ಪ್ರಸಾರ