ಬೆಂಗಳೂರು: ಬಿಗ್ ಬಾಸ್ ಬಳಿಕ ನಟ ಶೈನ್ ಶೆಟ್ಟಿ ಕೆಲವು ಸಿನಿಮಾ ಮಾಡುವ ಸುದ್ದಿ ಬಂದಿತ್ತು. ಇದರ ನಡುವೆ ಲಾಕ್ ಡೌನ್ ನಲ್ಲಿ ಸಮಾಜ ಸೇವೆ ಮಾಡುವುದರಲ್ಲಿ ಶೈನ್ ತೊಡಗಿಸಿಕೊಂಡಿದ್ದರು. ಅದರ ನಡುವೆ ಅವರ ಹೊಸ ವಿಡಿಯೋವೊಂದು ಈಗ ವೈರಲ್ ಆಗಿದೆ.ಲಾಕ್ ಡೌನ್ ಬಳಿಕ ಕಿರುತೆರೆ ಮತ್ತೆ ಹೊಸ ಎಪಿಸೋಡ್ ಗಳೊಂದಿಗೆ ಬರುತ್ತಿದೆ. ಕಲರ್ಸ್ ವಾಹಿನಿ ಈಗ ಹೊಸ ಪ್ರೋಮೋ ಹರಿಯಬಿಟ್ಟಿದ್ದು ಈ ವಿಡಿಯೋದಲ್ಲಿ ಶೈನ್ ಅಪ್ಪನ ಪಾತ್ರ ಮಾಡಿದ್ದಾರೆ.