ಕೊನೆಗೂ ಪ್ರೇಕ್ಷಕರ ಆಸೆ ನೆರವೇರಿತು! ವೀಕೆಂಡ್ ವಿತ್ ರಮೇಶ್ ನಲ್ಲಿ ಬರಲಿರುವ ಆ ಸ್ಪೆಷಲ್ ಅತಿಥಿ ಯಾರು ಗೊತ್ತಾ?!

ಬೆಂಗಳೂರು, ಶನಿವಾರ, 13 ಜುಲೈ 2019 (09:44 IST)

ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಫೈನಲ್ ಎಪಿಸೋಡ್ ಗೆ ಬಂದು ನಿಂತಿದೆ. ಆದರೆ ಪ್ರೇಕ್ಷಕರು ತಾವು ಬಯಸಿದ ಕೆಲವು ಅತಿಥಿಗಳು ಸಾಧಕರ ಸೀಟ್ ನಲ್ಲಿ ಕೂರಲಿಲ್ಲ ಎಂಬ ಬೇಸರದಲ್ಲಿದ್ದಾರೆ.


 
ಆದರೆ ಫೈನಲ್ ಎಪಿಸೋಡ್ ನಲ್ಲಿ ವೀಕ್ಷಕರು ಇದುವರೆಗೆ ಆಗ್ರಹಿಸಿದ್ದ ಸಾಧಕರೊಬ್ಬರ ಆಗಮನವಾಗಲಿದೆ. ಫೈನಲ್ ಎಪಿಸೋಡ್ ಈ ಬಾರಿ ಒಬ್ಬರೇ ಸಾಧಕರ ಬಗ್ಗೆ ಇರುವುದಿಲ್ಲ. ಬೇರೆ ಮಾದರಿಯಲ್ಲಿ ಫೈನಲ್ ಎಪಿಸೋಡ್ ಮಾಡಲಾಗುತ್ತದೆ ಎಂದು ಈಗಾಗಲೇ ನಿರೂಪಕ ರಮೇಶ್ ಅರವಿಂದ್ ಸುಳಿವು ಕೊಟ್ಟಿದ್ದಾರೆ.
 
ಈ ನಡುವೆ ಫೈನಲ್ ಎಪಿಸೋಡ್ ನಲ್ಲಿ ಎಷ್ಟೋ ಯುವ ಜನರಿಗೆ ಸ್ಪೂರ್ತಿಯಾಗಿರುವ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದು, ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಘೋಷಿಸಿದ್ದ ಅಣ್ಣಾ ಮಲೈ ಅತಿಥಿಯಾಗುತ್ತಿದ್ದಾರೆ. ಅವರ ಜತೆಗೆ ಖ್ಯಾತ ಚಿತ್ರ ಕಲಾವಿದ ವಿಲಾಸ್ ನಾಯಕ್ ಆಗಮಿಸುತ್ತಿದ್ದಾರೆ. ಇವರಲ್ಲದೇ ಇನ್ನೂ ಅನೇಕ ಅಚ್ಚರಿಗಳು ಈ ಫೈನಲ್ ಎಪಿಸೋಡ್ ನಲ್ಲಿರಲಿವೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರ ಪಾಲಿಗೆ ಸೂಪರ್ ...

news

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?

ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳಿನ ಬೇಡಿಕೆಯ ನಟಿಯಾಗಿರುವುದು ಎಲ್ಲರಿಗೂ ...

news

ಶಿವಣ್ಣ ಬರ್ತ್ ಡೇಗೆ ಲಂಡನ್ ಗೆ ತೆರಳಿದ ಪುನೀತ್ ಮತ್ತು ಕುಟುಂಬ

ಬೆಂಗಳೂರು: ಅಣ್ಣ, ಎನರ್ಜಟಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಶಿವಣ್ಣ ಈ ಬಾರಿ ...

news

ವೀಕೆಂಡ್ ವಿತ್ ರಮೇಶ್ ಗೆ ಕೊನೆಗೂ ತೆರೆ

ಬೆಂಗಳೂರು: ಈ ಬಾರಿಯಾದರೂ ವೀಕೆಂಡ್ ವಿತ್ ರಮೇಶ್ ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ದಿಗ್ಗಜ ...