ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಗಟ್ಟಿಮೇಳ ಇನ್ನೇನು ಕೆಲವೇ ಎಪಿಸೋಡ್ ಗಳು ಮಾತ್ರ ಪ್ರಸಾರವಾಗಲಿದೆ ಎಂದು ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ.ಹಾಗಿದ್ದರೂ ಧಾರವಾಹಿ ಇನ್ನೂ ಮುಕ್ತಾಯ ಕಂಡಿಲ್ಲ. ಇದಕ್ಕೆ ಕಾರಣ ಜೀ ವಾಹಿನಿ ಅದೇ ಸ್ಲಾಟ್ ಗೆ ಇನ್ನೊಂದು ಧಾರವಾಹಿ ನಿರ್ಮಾಣ ಮಾಡುತ್ತಿದ್ದು, ಅದಿನ್ನೂ ಸರಿಯಾಗಿ ಟೇಕ್ ಆಫ್ ಆಗಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಡಿಸೆಂಬರ್ ಎರಡನೇ ವಾರದವರೆಗೂ ಗಟ್ಟಿಮೇಳ ಧಾರವಾಹಿ ಮುಂದುವರಿಯುವ ಸಾಧ್ಯತೆಯಿದೆ