ಮಧ್ಯರಾತ್ರಿ ಮನೆಗೆ ಬಂದು ಮಜಾ ಟಾಕೀಸ್ ರಾಣಿಗೆ ಸರ್ಪೈಸ್ ಕೊಟ್ಟ ಸೃಜನ್ ಲೋಕೇಶ್

ಬೆಂಗಳೂರು| Krishnaveni K| Last Modified ಬುಧವಾರ, 10 ಫೆಬ್ರವರಿ 2021 (09:21 IST)
ಬೆಂಗಳೂರು: ನಟಿ ಶ್ವೇತಾ ಚಂಗಪ್ಪಗೆ ಇಂದು ಜನ್ಮದಿನದ ಸಂಭ್ರಮ. ಈ ವಿಶೇಷ ದಿನವನ್ನು ಅವರ ಮಜಾ ಟಾಕೀಸ್ ಕುಟುಂಬ ವಿಶೇಷವಾಗಿ ಆಚರಿಸಿದೆ.
 

ಮಧ್ಯರಾತ್ರಿ ಮನೆಗೆ ಬಂದು ಸೃಜನ್ ಲೋಕೇಶ್ ಅವರ ಪತ್ನಿ ಗ್ರೀಷ್ಮಾ, ಮತ್ತು ಕುಟುಂಬಸ್ಥರು, ಶ್ವೇತಾಗೆ ಸರ್ಪೈಸ್ ಕೊಟ್ಟಿದ್ದಾರೆ. ಇಡೀ ಕುಟುಂಬಸ್ಥರು ಜೊತೆಯಾಗಿ ಬರ್ತ್ ಡೇ ಸೆಲಬ್ರೇಟ್ ಮಾಡಿದ್ದಾರೆ. ಈ ಗಳಿಗೆಯನ್ನು ಯಾವತ್ತೂ ಮರೆಯಲಾಗದು. ನನ್ನ ಈ ದಿನ ಸ್ನೇಹಿತರಿಂದಾಗಿ ಸ್ಪೆಷಲ್ ಆಯ್ತು ಎಂದು ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :