ಹಲವಾರು ಜನಪ್ರಿಯ ಧಾರಾವಾಹಿಗಳು ಹಾಗೂ ರಿಯಾಲಿಟಿ ಷೋಗಳ ಮೂಲಕ ಕಿರುತೆರೆ ವೀಕ್ಷಕರ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಾರಸ್ದಾರ ಎಂಬ ವಿನೂತನ ಧಾರಾವಾಹಿಯನ್ನು ಆರಂಭಿಸಿತ್ತು. ಒಂದು ತಿಂಗಳ ಅವಧಿಯಲ್ಲೇ ಅಪಾರ ಸಂಖ್ಯೆಯಲ್ಲಿ ವೀಕ್ಷಕ ಬಳಗವನ್ನು ಸಂಪಾದಿಸಿದ ಈ ಧಾರಾವಾಹಿಯಲ್ಲಿ ಇದೀಗ ಮಹತ್ತರ ಪಾತ್ರವೊಂದರ ಎಂಟ್ರಿಯಾಗುತ್ತಿದೆ. ಅದೂ ಬೇರಾರೂ ಅಲ್ಲ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟ್ಟ ಮಗು ಚಿತ್ರಾಲಿ.