ಕಿರುತೆರೆ ಸ್ಟಾರ್ ನಟಿ ಕವಿತಾ ಗೌಡ ಕಿಡ್ನಾಪ್!

ಬೆಂಗಳೂರು| Ramya kosira| Last Modified ಗುರುವಾರ, 25 ನವೆಂಬರ್ 2021 (07:56 IST)

ಲಕ್ಷ್ಮೀ ಬಾರಮ್ಮ ಸೀರಿಯಲ್ನ ಚಿನ್ನು ಪಾತ್ರಧಾರಿ ಯಾರು ಎಂದರೇ ಇಡೀ ಕರ್ನಾಟವೇ ಉತ್ತರ ನೀಡುತ್ತೆ. ಹೌದು, ಈ ಸೀರಿಯಲ್ ಮೂಲಕ ಕವಿತಾ ಗೌಡ ಮನೆ ಮನೆಗೂ ಪರಿಚಯವಾದವರು.
ಕಿರುತರೆ ಹಾಗೂ ಕೆಲ ಸಿನಿಮಾದಲ್ಲೂ ಕವಿತಾ ಗೌಡ ಬಣ್ಣ ಹಚ್ಚಿದ್ದಾರೆ. ಕವಿತಾ ಗೌಡ ಎಂಬ ಹೆಸರು ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಅದೇ ಲಕ್ಷ್ಮಿ ಬಾರಮ್ಮ ಸೀರಿಯಲ್ನ ಚಿನ್ನು ಎಂದರೆ ಎಲ್ಲರಿಗೂ ತಿಳಿಯುತ್ತೆ. ಇದೀಗ ಕವಿತಾ ಗೌಡ ಅಲಿಯಾಸ್ ಚಿನ್ನು ಅವರನ್ನು ಕಿಡ್ನಾಪ್ ಮಾಡಲಾಗಿದೆ. ಹೌದು, ಇದು ನಿಜ ಶಾಪ್ವೊಂದರ ಆಚೆ ಬರುತ್ತಿದ್ದ ಕವಿತಾ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಸೆಲ್ಫಿ ಕೇಳುವ ನೆಪದಲ್ಲಿ ನಾಲ್ವರು ನಟಿ ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಕಾರಿನಲ್ಲಿ ಬರುವ ನಾಲ್ವರ ತಂಡ ಸೆಲ್ಫಿಗಾಗಿ ಮನವಿ ಮಾಡುತ್ತಾರೆ ಇದಕ್ಕೆ ಒಪ್ಪುವ ಕವಿತಾ ಕೂಡ ಸೆಲ್ಫಿ ನೀಡುತ್ತಾರೆ. ಹೀಗೆ ಯಾಮಾರಿಸಿ ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಈ ಸುದ್ಧಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅರೇ ಯಾರದು ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಿದವರು ಅಂತ ಯೋಚಿಸುತ್ತಿದ್ದೀರಾ? ಹೆಚ್ಚು ಟೆನ್ಶನ್ ಆಗುವುದು ಬೇಡ. ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಿದ್ದು, ಬೇರೆ ಯಾರು ಅಲ್ಲ ‘ಗೋವಿಂದ ಗೋವಿಂದ’ ಸಿನಿಮಾ ತಂಡದವರೇ. ಗಾಬರಿಯಾಗಬೇಡಿ, ಕವಿತಾ ಗೌಡ ಅಭಿನಯದ 'ಗೋವಿಂದ ಗೋವಿಂದ' ಸಿನಿಮಾದ ಕಿಡ್ನಾಪ್ ಸೀನ್ ಆಗಿದ್ದು, ಈ ದೃಶ್ಯವನ್ನು ಪ್ರಚಾರಕ್ಕಾಗಿ ಚಿತ್ರತಂಡ
ಬಳಸಿಕೊಂಡಿದೆ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :