ಬೆಂಗಳೂರು: ಕೊರೋನಾಗಾಗಿ ರಾಜ್ಯ ಸರ್ಕಾರವೇನೋ ಎರಡು ಹಂತದಲ್ಲಿ ನಿರಂತರವಾಗಿ ಲಾಕ್ ಡೌನ್ ವಿಧಿಸಿದೆ. ಆದರೆ ಇದರ ಬಗ್ಗೆ ಕಲಾವಿದರಲ್ಲಿ ಅಸಮಾಧಾನವಿದೆ. ಕೆಲವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮಅಸಮಾಧಾನ ಹೊರಹಾಕುತ್ತಿದ್ದಾರೆ. ಪ್ರತಿನಿತ್ಯ ದುಡಿಯುತ್ತಿದ್ದ ಕಲಾವಿದರಿಗೆ ಈಗ ಲಾಕ್ ಡೌನ್ ನಿರ್ಬಂಧದಿಂದಾಗಿ ಆದಾಯವಿಲ್ಲದಂತಾಗಿದೆ. ಇದರಿಂದಾಗಿ ಕಿರುತೆರೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.ಹೀಗಾಗಿ ನಟ ಚಂದನ್ ಕುಮಾರ್, ನಟಿ ಅಮೃತಾರಾಮಮೂರ್ತಿ ಸೇರಿದಂತೆ ಹಲವರು ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಇನ್ನೂ ಎಷ್ಟು ದಿನ ಹೀಗಿರಬೇಕು? ನೀವೇನೋ ಲಾಕ್