ಬೆಂಗಳೂರು: ಲಾಕ್ ಡೌನ್ ಜಾರಿಯಾದ ಬಳಿಕ ಟಿವಿ ಲೋಕ ಸ್ತಬ್ಧವಾಗಿ ತಿಂಗಳ ಮೇಲಾಯಿತು. ವೀಕ್ಷಕರಿಗೆ ತಮ್ಮ ಮೆಚ್ಚಿನ ಕಾರ್ಯಕ್ರಮ ಎಲ್ಲಿ ನಿಂತು ಹೋಗಿತ್ತು ಎಂಬುದೇ ಮರೆತು ಹೋಗಿದೆ. ಹೀಗಿರುವಾಗ ಪುನರಾರಂಭಿಸುವ ಚಿಂತೆಯಲ್ಲಿ ಟಿವಿ ಲೋಕವಿದೆ.ಒಂದು ಧಾರವಾಹಿಯೇ ಆಗಲಿ, ರಿಯಾಲಿಟಿ ಶೋವೇ ಆಗಲಿ ಕೊನೆಯ ಬಾರಿಗೆ ಏನಾಗಿತ್ತು ಎಂಬುದು ಜನರಿಗೆ ಮರೆತೇ ಹೋಗುವಷ್ಟು ದಿನಗಳಾಗಿವೆ. ಹೀಗಾಗಿ ಎಲ್ಲವನ್ನೂ ಹೊಸದಾಗಿ ಆರಂಭಿಸುವಷ್ಟೇ ಶ್ರದ್ಧೆಯಿಂದ ಆರಂಭಿಸುವ ಹೊಣೆಗಾರಿಕೆ ಟಿವಿ ಲೋಕದ ನಿರ್ಮಾಪಕರು, ನಿರ್ದೇಶಕರ ಮೇಲಿದೆ.ಇದರ