ಬೆಂಗಳೂರು: ಕಿರುತೆರೆಯ ಎರಡು ವಾಹಿನಿಗಳಲ್ಲಿ ಮತ್ತೆ ಎರಡು ಜನಪ್ರಿಯ ಶೋಗಳು ಪುನರಾರಂಭಗೊಳ್ಳುತ್ತಿದೆ. ಈಗಾಗಲೇ ಆಡಿಷನ್ ಗೆ ಕರೆ ನೀಡಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಶೋ ಹೊಸ ಶೋ ಸದ್ಯದಲ್ಲೇ ಆರಂಭವಾಗಲಿದೆ. ಈಗಾಗಲೇ ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಆಡಿಷನ್ ನಡೆಸಲಾಗುತ್ತಿದೆ. ಈ ಬಾರಿ ಮಕ್ಕಳಿಗಾಗಿ ಶೋ ನಡೆಸಲಾಗುತ್ತದೆ.ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ನನ್ನಮ್ಮ ಸೂಪರ್ ಸ್ಟಾರ್ ಮೊದಲ ಭಾಗ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಎರಡನೇ ಭಾಗ ಆರಂಭವಾಗುತ್ತಿದೆ.