ಬೆಂಗಳೂರು: ಕಿರುತೆರೆ ಮತ್ತು ಹಿರಿತೆರೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ಡಿಂಪಲ್ ಹುಡುಗ ವಿಜಯ್ ಸೂರ್ಯ ಈಗ ಸರ್ಕಾರಿ ಶಾಲೆಗಳ ಪರವಾಗಿ ಮಾತನಾಡಿದ್ದಾರೆ.ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ, ಸರ್ಕಾರಿ ಶಾಲೆಗಳು ಈಗ ಹಿಂದಿನಂತಿಲ್ಲ ಎಂದು ಸುದೀರ್ಘ ಪೋಸ್ಟ್ ಒಂದನ್ನು ಮಾಡಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ದೊಡ್ಡ ದೊಡ್ಡ ಹೆಸರು ಮಾಡಿದ್ದಾರೆ. ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈಗ ಸರ್ಕಾರಿ ಶಾಲೆಗಳು ಹಿಂದಿನಂತಿಲ್ಲ. ಅಭಿವೃದ್ಧಿಯಾಗುತ್ತಿವೆ.