ಬೆಂಗಳೂರು: ಮದುವೆ ಆಗಿದ್ದೇ ಆಗಿದ್ದು, ವಿಜಯ್ ಸೂರ್ಯ ಅಲಿಯಾಸ್ ಅಗ್ನಿಸಾಕ್ಷಿ ಸಿದ್ಧಾರ್ಥ್ ತೆರೆ ಮೇಲೆ ಕಾಣಿಸ್ತಾನೇ ಇಲ್ಲ ಎನ್ನುವ ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವಿಜಯ್ ಸೂರ್ಯ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ. ಆದರೆ ತಲೆಗೆ ಏಟು ಮಾಡಿಕೊಂಡಂತೆ ಬ್ಯಾಂಡೇಜ್ ಸುತ್ತಿಕೊಂಡಿರುವ ವಿಜಯ್ ಅವತಾರ ನೋಡಿ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್