ಬೆಂಗಳೂರು: ಕಿರುತೆರೆಯ ಮೋಸ್ಟ್ ವಾಂಟೆಡ್ ಹೀರೋ ವಿಜಯ್ ಸೂರ್ಯ ಮತ್ತೆ ಜನಪ್ರಿಯ ಧಾರವಾಹಿಯ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರವಾಹಿಯ ಅತಿಥಿ ಪಾತ್ರವೊಂದನ್ನು ವಿಜಯ್ ಸೂರ್ಯ ಮಾಡಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ನಾಯಕಿ ಅನು ಸಿರಿಮನೆಯನ್ನು ಮದುವೆಯಾಗಲಿರುವ ವರನಾಗಿ ವಿಜಯ್ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಈ ವಿಚಾರವನ್ನು ಧಾರವಾಹಿ ತಂಡ ಸಸ್ಪೆನ್ಸ್ ಆಗಿಟ್ಟಿದೆ.