ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪ್ರೇಮಲೋಕ ಧಾರವಾಹಿಗೆ ವಿಶಿಷ್ಟವಾಗಿ ಓಪನಿಂಗ್ ಸಿಕ್ಕಿದೆ.ಇದೇ ಮೊದಲ ಬಾರಿಗೆ ಒಂದು ಧಾರವಾಹಿಗೆ ಲಾಂಚಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ. ದಾವಣಗೆರೆಯಲ್ಲಿ ಈ ಕಾರ್ಯಕ್ರಮ ನಿನ್ನೆ ಸಂಜೆ ನಡೆದಿದ್ದು, ನಾಯಕ ವಿಜಯ್ ಸೂರ್ಯ ಮತ್ತು ಇಡೀ ಧಾರವಾಹಿ ಬಳಗ ಹಾಜರಿತ್ತು.ಧಾರವಾಹಿ ಕೆಲವು ಎಪಿಸೋಡ್ ಪ್ರಸಾರವಾದ ಮೇಲೆ ಅಭಿಮಾನಿಗಳ ಜತೆ ಸೀರಿಯಲ್ ಸಂತೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಧಾರವಾಹಿಯನ್ನು ಪ್ರೇಕ್ಷಕರ ಸಮ್ಮುಖದಲ್ಲೇ ಲಾಂಚ್