ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಎರಡು ಕಂತು ಪೂರೈಸಿರುವ ವೀಕೆಂಡ್ ವಿದ್ ರಮೇಶ್ ಎಲ್ಲಾ ವರ್ಗದ ಪ್ರೇಕ್ಷಕರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿತ್ತು. ಅದು ಮುಕ್ತಾಯವಾದಾಗ ಎಷ್ಟೋ ಜನ ಮಗಿದೇ ಹೋಯ್ತಲ್ಲಾ ಎಂದು ಬೇಸರ ಪಟ್ಟುಕೊಂಡಿದ್ದೂ ಇದೆ. ಆದರೆ ಬೇಸರಪಡಬೇಕಾದ ಅಗತ್ಯವಿಲ್ಲ. ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮ ಶುರುವಾಗುತ್ತದಂತೆ.ಎಲ್ಲಾ ಅಂದುಕೊಂಡಂತೆ ಆದರೆ ಈ ಬಾರಿಯಾದರೂ ವಿವಿಧ ಕ್ಷೇತ್ರದ ಸಾಧಕರನ್ನು ಸಾಧಕರ ಸೀಟಿನಲ್ಲಿ ಕೂರಿಸಿ ಅವರ ಬದುಕಿನ ಕತೆ ಕೇಳುವ