ವೀಕೆಂಡ್ ವಿತ್ ರಮೇಶ್ ಗೆ ಕೊನೆಗೂ ತೆರೆ

ಬೆಂಗಳೂರು, ಶುಕ್ರವಾರ, 12 ಜುಲೈ 2019 (09:58 IST)

ಬೆಂಗಳೂರು: ಈ ಬಾರಿಯಾದರೂ ವೀಕೆಂಡ್ ವಿತ್ ರಮೇಶ್ ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ದಿಗ್ಗಜ ಕ್ರಿಕೆಟ್ ಸಾಧಕರನ್ನೂ ನೋಡಬಹುದು ಎಂದು ಕಾಯುತ್ತಿದ್ದವರಿಗೆ ನಿರಾಶೆಯೇ ಉತ್ತರವಾಗಿದೆ. ಅಂತೂ ಈ ಸೀಸನ್ ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವೂ ಮುಕ್ತಾಯ ಕಾಣುತ್ತಿದೆ.
 


ಇದೀಗ ಫೈನಲ್ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಈ ವಾರವೇ ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ. ಈ ಬಾರಿಯೂ ಪ್ರೇಕ್ಷಕರು ಬಯಸಿದ ಎಲ್ಲಾ ಅತಿಥಿಗಳನ್ನು ಕರೆತರಲು ವಾಹಿನಿಗೆ ಸಾಧ್ಯವಾಗಿಲ್ಲ.
 
ಸ್ಯಾಂಡಲ್ ವುಡ್ ಸಾಧಕರನ್ನೇ ಹೆಚ್ಚಾಗಿ ಕರೆತರಲಾಗುತ್ತಿದೆ ಎಂಬ ಆಪಾದನೆಗಳ ನಡುವೆಯೂ ಸೀಸನ್ 4 ಕೊನೆಗೊಳ್ಳಲಿದೆ. ಈ ಸಂಚಿಕೆ ಮುಕ್ತಾಯ ಕಾಣುತ್ತಿರುವುದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಸಂಚಿಕೆ ಆದಷ್ಟು ಬೇಗ ಬರಲಿ ಎಂದು ಹಾರೈಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜತೆಗೆ ಜ್ಯೂನಿಯರ್ ಎನ್ ಟಿಆರ್ ಸಿನಿಮಾ?

ಹೈದರಾಬಾದ್: ಕೆಜಿಎಫ್ ಸಿನಿಮಾದಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪರಭಾಷಾ ಸ್ಟಾರ್ ಗಳಿಗೂ ...

news

ಅಗ್ನಿಸಾಕ್ಷಿ ರಾಧಿಕಾರ ಮೊದಲ ಚಿತ್ರಕಥಾ!

ಇತ್ತೀಚೆಗಷ್ಟೇ ಚಿತ್ರಕಥಾ ಚಿತ್ರತಂ ಪೋಸ್ಟರ್ಗಳ ಮೂಲಕವೇ ಈ ಸಿನಿಮಾದಲ್ಲಿರೋ ಕ್ಯಾರೆಕ್ಟರುಗಳು ಮಾಮೂಲಿಯವಲ್ಲ ...

news

ಚಿತ್ರಕಥಾಗೆ ಹೊಸ ದಿಕ್ಕು ತೋರೋ ಕೊರವಂಜಿ!

ಹಲವಾರು ವರ್ಷಗಳ ಕಾಲ ನಿರ್ದೇಶಕನಾಗೋ ಕನಸಿನೊಂದಿಗೆ ಸೈಕಲ್ಲು ಹೊಡೆದವರು ಯಶಸ್ವಿ ಬಾಲಾದಿತ್ಯ. ಈವರೆಗೂ ...

news

ಚಿತ್ರಕಥಾ: ಮತ್ತೆ ಬಾರಿನಲ್ಲಿ ತಬಲದ ಸೌಂಡು!

ತಬಲಾ ನಾಣಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಮ್ಯಾನರಿಸಂ ಮತ್ತು ಬೇರೆಯದ್ದೇ ಥರದ ಪಾತ್ರಗಳ ಮೂಲಕ ...