ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ವಾರವೇ ಕೊನೆಯಾಗಲಿದೆ.ಈ ವಾರ ಕಾಂಗ್ರೆಸ್ ನಾಯಕ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನ ಕತೆಯನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡಲಿದ್ದಾರೆ. ಡಿಕೆಶಿ ಈ ಶೋನ 100 ನೇ ಸಾಧಕರಾಗಿದ್ದಾರೆ.ಇದರೊಂದಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ 5 ನೇ ಸೀಸನ್ ಮುಕ್ತಾಯವಾಗಲಿದೆ. 100 ನೇ ಸಾಧಕರು ತುಂಬಾ ವಿಶೇಷ ವ್ಯಕ್ತಿಯಾಗಿರುತ್ತಾರೆ