Widgets Magazine

ಬಿಗ್ ಬಾಸ್ ಕನ್ನಡ ಈ ಬಾರಿ ಯಾವ ವಾಹಿನಿಗೆ?

ಬೆಂಗಳೂರು| Krishnaveni K| Last Modified ಶುಕ್ರವಾರ, 8 ಮೇ 2020 (09:07 IST)
ಬೆಂಗಳೂರು: ಬಿಗ್ ಬಾಸ್ ಏಳನೇ ಆವೃತ್ತಿ ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಇದೀಗ ಬಿಗ್ ಬಾಸ್ 8 ನೇ ಆವೃತ್ತಿ ಬಗ್ಗೆ ಚರ್ಚೆ ಶುರುವಾಗಿದೆ.
 

ಯಾಕೆಂದರೆ ಕಲರ್ಸ್ ಕನ್ನಡ ವಾಹಿನಿ ಜತೆಗೆ ಮಾಡಿಕೊಂಡಿರುವ ಬಿಗ್ ಬಾಸ್ ಶೋ ಒಪ್ಪಂದ ಕಳೆದ ಸೀಸನ್ ಗೆ ಮುಗಿದಿದೆ. ಹೀಗಾಗಿ ಹೊಸದಾಗಿ ಬಿಗ್ ಬಾಸ್ ಹಕ್ಕು ಪಡೆಯಲು ಕನ್ನಡದ ಪ್ರಮುಖ ವಾಹಿನಿಗಳು ಪೈಪೋಟಿ ನಡೆಸಿವೆ.
 
ಹಿಂದೊಮ್ಮೆ ಸ್ಟಾರ್ ಸುವರ್ಣ ವಾಹಿನಿ ಬಿಗ್ ಬಾಸ್ ಹಕ್ಕು ಪಡೆದಿತ್ತು. ಅದು ಬಿಟ್ಟರೆ ಉಳಿದೆಲ್ಲಾ ಆವೃತ್ತಿಗಳೂ ಕಲರ್ಸ್ ವಾಹಿನಿಯಲ್ಲೇ ಪ್ರಸಾರವಾಗಿತ್ತು. ಈ ಬಾರಿ ಬಿಗ್ ಬಾಸ್ ಹಕ್ಕು ಯಾವ ವಾಹಿನಿ ಪಾಲಾಗಲಿದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :