ಅರ್ಧಕ್ಕೇ ನಿಂತ ಬಿಗ್ ಬಾಸ್ ಮತ್ತೆ ಶುರುವಾಗುತ್ತಂತೆ!

ಬೆಂಗಳೂರು| Krishnaveni K| Last Modified ಶನಿವಾರ, 12 ಜೂನ್ 2021 (09:43 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ನೇ ಆವೃತ್ತಿ ಅರ್ಧಕ್ಕೇ ರದ್ದುಗೊಂಡಿತ್ತು. ಆದರೆ ಅದೀಗ ಪುನರಾರಂಭವಾಗಲಿದೆಯಂತೆ!

 
ಈಗ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗಿದೆ. ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಯೂ ಆರಂಭವಾಗಲಿದೆ. ಹೀಗಾಗಿ ಬಿಗ್ ಬಾಸ್ ಕೂಡಾ ಪುನರಾರಂಭವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
 
ಆದರೆ ಈ ಬಗ್ಗೆ ಚಾನೆಲ್ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಬಿಗ್ ಬಾಸ್ ಅರ್ಧಕ್ಕೇ ನಿಂತಾಗ ಸ್ಪರ್ಧಿಗಳು, ಅಭಿಮಾನಿಗಳಿಗೆ ಬೇಸರವಾಗಿತ್ತು. ಈ ಬಾರಿ ವಿಜೇತರು ಯಾರು ಎಂಬುದು ನಿರ್ಧಾರವಾಗಿರಲಿಲ್ಲ. ಹೀಗಾಗಿ ಮತ್ತೆ ಶೋ ಆರಂಭವಾಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :