Widgets Magazine

ಜನಪ್ರಿಯ ಧಾರವಾಹಿಗೆ ಕತ್ತರಿ ಹಾಕಿದ ಜೀ ವಾಹಿನಿ

ಬೆಂಗಳೂರು| Krishnaveni K| Last Modified ಶುಕ್ರವಾರ, 22 ಮೇ 2020 (09:51 IST)
ಬೆಂಗಳೂರು: ಲಾಕ್ ಡೌನ್ ಪರಿಣಾಮ ಹಲವಾರು ಧಾರವಾಹಿಗಳು ಅರ್ಧಕ್ಕೇ ಪ್ರಸಾರ ನಿಲ್ಲಿಸಿವೆ. ಇದೀಗ ಜೀ ವಾಹಿನಿಯೂ ತನ್ನ ಜನಪ್ರಿಯ ಧಾರವಾಹಿಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದೆ.

 
ಉದಯ ವಾಹಿನಿ, ಕಲರ್ಸ್ ವಾಹಿನಿ ತನ್ನ ಹಲವಾರು ಧಾರವಾಹಿಗಳನ್ನು ಅರ್ಧಕ್ಕೇ ನಿಲ್ಲಿಸುವ ಬಗ್ಗೆ ಈಗಾಗಲೇ ಪ್ರಕಟಣೆ ನೀಡಿತ್ತು. ಇದೀಗ ವಾಹಿನಿಯೂ ಪ್ರತಿನಿತ್ಯ 6 ಗಂಟೆಗೆ ಪ್ರಸಾರವಾಗುತ್ತಿದ್ದ ‘ಸುಬ್ಬಲಕ್ಷ್ಮಿ ಸಂಸಾರ’ ಧಾರವಾಹಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ.
 
ಧಾರವಾಹಿಯಲ್ಲಿ ಇನ್ನೂ ಒಳ್ಳೆಯ ಕ್ಲೈಮ್ಯಾಕ್ಸ್ ಇತ್ತು. ಆದರೆ ಲಾಕ್ ಡೌನ್ ನಿಂದಾಗಿ ಅದನ್ನು ಪೂರ್ಣ ಮಾಡಲಾಗುತ್ತಿಲ್ಲ ಎನ್ನಲಾಗಿದೆ. ಸ್ವಪ್ನ ಕೃಷ್ಣ ಈ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದ್ದರು.
ಇದರಲ್ಲಿ ಇನ್ನಷ್ಟು ಓದಿ :