ನವದೆಹಲಿ(ಆ.02): ಕೋವಿಡ್ 2ನೇ ಅಲೆ ಮುಗಿದು, ಆರ್ಥಿಕತೆ ಚೇತರಿಕೆ ಆಗುತ್ತಿರುವ ಲಕ್ಷಣಗಳನ್ನು ಸರಕು-ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ತೋರಿಸಿದೆ. ಜುಲೈ ತಿಂಗಳಲ್ಲಿ ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ ಆಗಿದ್ದು, ಇದು ಈ ವಿತ್ತೀಯ ವರ್ಷದಲ್ಲಿ 2ನೇ ಅತಿ ಗರಿಷ್ಠ ಜಿಎಸ್ಟಿ ಸಂಗ್ರಹವಾಗಿದೆ.