ಬೆಂಗಳೂರು : ಅಕಾಲಿಕ ಮಳೆಯಿಂದ ಆದ ಬೆಳೆ ಹಾನಿಯ ವರದಿಗಳ ಮಧ್ಯೆಯೂ ಮಂಡಿಗಳಿಗೆ ನಿಧಾನಗತಿಯಲ್ಲಿ ಬಂದಿದ್ದರಿಂದ ಸೋಮವಾರ ಟೊಮೆಟೊ ರೀಟೇಲ್ ಬೆಲೆ ಮೆಟ್ರೋಗಳಲ್ಲಿ ಪ್ರತಿ ಕೇಜಿಗೆ 93 ರೂಪಾಯಿ ಇತ್ತು, ಎಂದು ಸರ್ಕಾರದ ಅಂಕಿ- ಅಂಶಗಳಿಂದ ತಿಳಿದುಬಂದಿದೆ. ಮೆಟ್ರೋ ನಗರಗಳ ಪೈಕಿ ಕೊಲ್ಕತ್ತಾದಲ್ಲಿ ಟೊಮೆಟೊ ಪ್ರತಿ ಕೇಜಿಗೆ ರೂ. 93, ಚೆನ್ನೈನಲ್ಲಿ ರೂ. 60, ದೆಹಲಿಯಲ್ಲಿ ರೂ. 59 ಮತ್ತು ಚೆನ್ನೈನಲ್ಲಿ ರೂ. 53 ಎಂದು ಸೋಮವಾರದ ದತ್ತಾಂಶವು ತೋರಿಸಿದೆ.