ಜಮ್ಮು/ಶಿಮ್ಲಾ(ಜು.29): ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶದಲ್ಲಿ ಬುಧವಾರ ಮೇಘಸ್ಫೋಟವಾಗಿದ್ದು, 17 ಜನರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ 8 ಹಾಗೂ ಹಿಮಾಚಲದಲ್ಲಿ 9 ಜನ ಅಸುನೀಗಿದ್ದಾರೆ. ಪವಿತ್ರ ಅಮರನಾಥ ಗುಹೆ ಸನಿಹವೂ ಮೇಘಸ್ಫೋಟ ಸಂಭವಿಸಿದ್ದು, ಯಾತ್ರೆಯ ಸಮಯ ಇದಾಗಿರದ ಕಾರಣ ಯಾವುದೇ ಸಾವು-ನೋವು ವರದಿ ಆಗಿಲ್ಲ. ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಾಧ್ಯವಿರುವ ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ,