ನವದೆಹಲಿ : ಸತತ ಎರಡನೇ ದಿನ ಭಾರತದಲ್ಲಿ ಕರೊನಾ ನಿತ್ಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಇಂದು ಬೆಳಿಗ್ಗೆ 8 ಗಂಟೆಯ ಕೇಂದ್ರ ಆರೋಗ್ಯ ಸಚಿವಾಲಯದ ವರದಿಯಂತೆ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ18,870 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ನಿನ್ನೆಯ ದಿನ 18,795 ಪ್ರಕರಣಗಳು ವರದಿಯಾಗಿದ್ದವು. ಮತ್ತೊಂದೆಡೆ, ಕರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 378 ಜನರು ಕರೊನಾಗೆ ಬಲಿಯಾಗಿದ್ದಾರೆ. ಅದೇ ನಿನ್ನೆಯ ವರದಿಯಲ್ಲಿ 179 ಕರೊನಾ ಸಾವುಗಳು ವರದಿಯಾಗಿದ್ದವು.