ನವದೆಹಲಿ(ಆ.02): 2017-19ರ ಅವಧಿಯಲ್ಲಿ ದೇಶದಲ್ಲಿ 14-18 ವಯೋಮಾನದ 24 ಸಾವಿರಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 4000ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರದ ಸರ್ಕಾರದ ವರದಿ ಹೇಳಿದೆ. * ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿ, ಡ್ರಗ್ಸ್, ಪ್ರೀತಿ ಪಾತ್ರರ ಅಗಲಿಕೆಯಿಂದ ಸಾವು * 3 ವರ್ಷದಲ್ಲಿ 24000 ಮಕ್ಕಳ ಆತ್ಮಹತ್ಯೆ ಮಕ್ಕಳ ಸಾವಿನ ಕುರಿತಾಗಿ ಎನ್ಸಿಆರ್ಬಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು,