ಟೋಕಿಯೋ (ಜುಲೈ 23): ಜಪಾನ್ ರಾಜಧಾನಿಯಲ್ಲಿ 2020ರ ಒಲಿಂಪಿಕ್ಸ್ ಭರ್ಜರಿಯಾಗಿ ಆರಂಭಗೊಂಡಿದೆ. ಮೊನ್ನೆಯೇ ಕೆಲ ಕ್ರೀಡೆಗಳ ಆಟ ಆರಂಭವಾದರೂ ಇಂದಿನಿಂದ ಒಲಿಂಪಿಕ್ಸ್ ಅಧಿಕೃತವಾಗಿ ಚಾಲನೆಗೊಂಡಿದೆ.ಮೊದಲ ದಿನವಾದ ಇಂದು ಬಿಲ್ಲುಗಾರಿಕೆ (ಆರ್ಚರಿ), ಈಕ್ವೆಸ್ಟ್ರಿಯನ್, ರೋವಿಂಗ್ (ದೋಣಿ ಸ್ಪರ್ಧೆ) ಮತ್ತು ಶೂಟಿಂಗ್ ಸ್ಪರ್ಧೆಗಳು ನಡೆಯುತ್ತಿವೆ. ಈ ನಾಲ್ಕೂ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದಾರೆ. ಹೀಗಾಗಿ, ಮೊದಲ ದಿನದ ಆಟಗಳತ್ತ ಭಾರತೀಯರ ಚಿತ್ತ ನೆಟ್ಟಿದೆ. ಇಂದು ನಡೆದ ಮಹಿಳಾ ವೈಯಕ್ತಿಕ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ