ವಾಷಿಂಗ್ಟನ್ : ಫೇಸ್ಬುಕ್, ವ್ಯಾಟ್ಸ್ಆಯಪ್, ಮತ್ತು ಇನ್ಸ್ಟಾಗ್ರಾಂಗಳು 6 ಗಂಟೆಗಳ ಕಾಲ ನಿಷ್ಟ್ರಿಯವಾದ ಕಾರಣದಿಂದಾಗಿ ಫೇಸ್ಬುಕ್ ಸಂಸ್ಥೆಯ ಸ್ಥಾಪಕ ಮಾರ್ಕ್ ಝುಕರ್ಬರ್ಗ್ಗೆ ಬರೋಬ್ಬರಿ 40 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ! ಸೋಮವಾರ ರಾತ್ರಿ 9ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆವರೆಗೆ ಈ ಮೂರು ಸಾಮಾಜಿಕ ಜಾಲತಾಣಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದವು. ಜಗತ್ತಿನ ಯಾವ ಭಾಗದಲ್ಲೂ ಇವು ಕಾರ್ಯಾಚರಣೆ ಮಾಡುತ್ತಿರಲಿಲ್ಲ. ಅತ್ತ ಅಮೆರಿಕದಲ್ಲಿನ ಷೇರುಪೇಟೆಯಲ್ಲೂ ಫೇಸ್ಬುಕ್ ಷೇರುಗಳು ಶೇ.5ರಷ್ಟು ಕುಸಿತವಾದವು. ಹೀಗಾಗಿ