ನವದೆಹಲಿ : ಹೆರಿಗೆ ಸಮಯದಲ್ಲಿ ಅಥವಾ ಮಗು ಹುಟ್ಟಿದ ನಂತರ ಮಗು ಮರಣ ಹೊಂದಿದರೆ ಕೇಂದ್ರ ಸರ್ಕಾರದ ಮಹಿಳಾ ನೌಕರರು 60 ದಿನಗಳ ಕಾಲ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಆದೇಶ ಹೊರಡಿಸಿದೆ.